ಭಾನುವಾರ, ಜೂನ್ 27, 2021

 ಕರಿ ಮೊಗದ ಚೆಲುವ 

ಮಲ್ಲಿಗೆಯಲಿ ಗೆದ್ದ ಮನವ 

ಒಡಲೇನೋ ಕಾಡಿಗೆ ಕಪ್ಪು 

ಮನಸೇನೊ ಹಾಲಿನ ಬಿಳುಪು 


ಎದೆಯಲಿ ಪೂಜಿಸಿದ ಕೂರಿಸಿ 

ನಾನಾದೆ ಅವನ ಹೃದಯದ ಅರಸಿ 

ಪ್ರಾಣವನೇ ನನಗಾಗಿ ಮುಡಿಪಾಗಿಟ್ಟ 

ನನ್ನ ಉಸಿರಿನಲಿ ಅವಿತು ಬಿಟ್ಟ 


ಪ್ರೀತಿಯಲಿ ಕಳೆಯಿತು ಹಗಲು ರಾತ್ರಿ 

ಅವನಿಗೊಪ್ಪಿಸಿದೆ ನನ್ನ ನಾ ಪೂರ್ತಿ 

ಮುದ್ದು ಮಕ್ಕಳ ಒಡತಿ ನಾನು 

ನನ್ನ ಬಾಳ ರಾಜಕುಮಾರ ಅವನು 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...