ಹೃದಯದಲ್ಲೊಂದು ಮೌನ
ಕರಗಬೇಕಾಗಿದೆ
ನಿನ್ನ ಬರುವಿಕೆಗಾಗಿ ಮನ
ಕಾತರಿಸಿ ಕಾದಿದೆ
ಹೆಜ್ಜೆ ಗೆ , ಹೆಜ್ಜೆ ಸೇರಿಸಬೇಕಾಗಿದೆ
ಕೈಯೊಳ ಕೈ ಬೆರಸಿ
ಹೃದಯದ ಬಡಿತ
ಆಲಿಸಬೇಕಿದೆ
ಎದೆಯ ಗೂಡಲ್ಲಿ ಗುಬ್ಬಿಯಂತಾಗಿ
ಮನಸಿನ ಮಾತು ನಿನ್ನೊಡ
ಹೇಳಬೇಕಾಗಿದೆ
ಕಣ್ಣ ಕಾಂತಿಯಲಿ
ನಲಿದು ಆನಂದದ ರುಚಿ
ಸವಿಯ ಬೇಕಾಗಿದೆ
ನಿನ್ನ ಅಧರಗಳಲ್ಲಿ ನನ್ನ
ಹೆಸರು ಉಲಿದು
ಮನದಾಳದಲ್ಲಿ
ನಿಲ್ಲಬೇಕಿದೆ
ಶಾಂತ ಚಿತ್ತದಿ ಮಲಗಿದ
ಸಮುದ್ರ ದಲ್ಲಿ
ಅಲೆಯೊಂದು ಬೀಸಿ
ಮೇಲೇಳಬೇಕಿದೆ
ದಾರಿ ಕಾದು ಕೂತ
ಕಡಲ ಮುಂದೆ
ನಿನ್ನ ಚಿತ್ರ ಕಾಣಬೇಕಿದೆ
ಸವಿದು ಹೋಗುತಿಹ
ಕತ್ತಲ ಬಾಳಿಗೆ
ಒಮ್ಮೆ ಬಂದು ಬೆಳಕು
ಹರಿಸಬೇಕಾಗಿದೆ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ