ಶನಿವಾರ, ಜೂನ್ 5, 2021

ಶಿವ

 ಒಂದಷ್ಟು ನೋವಿನ ಸಂಗತಿ 

ಓಡಿ ಬಂದೆವು ಶಿವ ನೀನೆ ಗತಿ 

ಕಾಲ ಕೋಟ ವಿಷವ ಕುಡಿದವ 

ಕೋಪದಿ ತ್ರಿನೇತ್ರವ ತೆರೆದವ 

ಬಾರೊ ಹರನೆ ನೀಗಿಸು ಬೇಗೆಯ 

ಹಿಂಡುವ ಜೀವವ ಕಾಪಾಡೆಯ


ದಗ ದಗಿಸುತಿದೆ ಕಣ್ಣೀರಲಿ ಜಗವು 

ಕಾಡುತಿದೆ ದೇವ ರೋಗವು 

ನಿಲ್ಲಿಸು ಸಾವಿನ ನರ್ತನವು 

ಸುಡುತಲಿದೆ ದುಃಖದಿ ಎದೆಯು 

ತಂಪಾಗಿಸಿ ಗಂಗೆಯ ಹರಿಸು 

ತೊಡೆದು ಹೋಗಲಿ ಸಕಲ ಪಾಪವು 


ಬೇಡಿದೆ ಮಹಾದೇವ ಬೀರು ಕೃಪಾದುಷ್ಟಿ 

ಆಗಲಿ ಶಾಂತಿ ತುಂಬಿದ ಲೋಕ ಮರುಸೃಷ್ಟಿ 

ಮಕ್ಕಳಲ್ಲವೇ ನಾವು ಮುನಿಸೇಕೆ ನಮ್ಮಲಿ 

ತಂದೆ ತಾಯಿ ನೀನು, ಕರುಣೆ ಇಲ್ಲವೆ ನಿನ್ನಲಿ 

ವರುಷ ಕಳೆಯಿತು ಹರುಷವು ಮರೆಯಾಯಿತು 

ಇನ್ನೆಷ್ಟು ಕಾಲವಯ್ಯ ಈ ಗೋಳು 


ಕರೆದಿದೆ ಆರ್ತನಾದದಲಿ ಭೂ ಲೋಕ 

ನರಕವಾಗಿಸದಿರಿನ್ನು ಸೋಲುವ ಪಾದವ 

ಕರೆದು ಬಿಡು ಕಣ್ಣು ತೆರೆದು ಒಮ್ಮೆ 

ಮುಗುಳು ನಗೆಯ ಸೂಸಿಬಿಡು ಮತ್ತೊಮ್ಮೆ 

ಹರ ಹರ ವೆನ್ನುತಲಿ ಹಾಲಹಲವು ಕರಗಲಿ 

ನಿನ್ನ ಬಕುತಿಯಲಿ ನೆಮ್ಮದಿಯ ದೀಪ ಬೆಳಗಲಿ 


ಓಂ ನಮೊ ಮಹದೀಶ ಓಂ ನಮೊ ಜಗದೀಶ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...