ಕನಸಿನ ಲೋಕದಲ್ಲಿ ಮನಸುಗಳ ಮಿಲನ
ಭಾವಗಳು ಜೊತೆಗೂಡಿ ಹೃದಯವು ಹಾಡಿದೆ ತನನ
ಮುಧುರ ನಾದದಲಿ ಪ್ರೀತಿಯ ಸಂಚಲನ
ನಯನಗಳು ಬೆರೆತಾಗ ಆಸೆಗಳ ತೋಮ್ ತನನ
ಮುಗಿಲು ನೀನು, ನವಿಲು ನಾನು ಜೊತೆಯಾಗಲು
ಸಂಗೀತ ಸ್ವರ ನಾದವು ಮೂಡಿ ಬರದೇನು
ನಿನ್ನಲಿ ನಾನಾಗಿ, ನನ್ನಲಿ ನಿನಾಗಿ ಬೆರೆತಿರಲು ಒಂದಾಗಿ
ಬೇರೇನೂ ಬೇಕಿಲ್ಲ, ಪ್ರಣಯವೇ ಬದುಕೆಲ್ಲ
ರಾಗಗಳು ಅನುರಾಗವಾಗಿ, ಮೊಗ್ಗರಳಿ ಹೂವಾಗಿ
ಗಮಿಸಲಿ ದಮನಿ ದಮನಿ ಯಲಿ ಸ್ಥಿರವಾಗಿ
ಹಾಡು ಬಾ, ಕೂಡು ಬಾ ಜಗದ ಚಿಂತೆ ಮರೆತು
ನಲಿಯುವ, ಹಾಡುವ ಒಂದಾಗಿ ಬೆರೆತು
ಮೌನವ ಸರಿಸಿ ಮುದ್ದಾಡು ನನ್ನ ಬಳಸಿ
ಅಧರಗಳೆರಡು ಕೂಡಲು ತುಂಬುವುದು ಒಲವ ಕಡಲು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ