ಶುಕ್ರವಾರ, ಆಗಸ್ಟ್ 6, 2021

 ಮೆಹಂದಿ 


ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ.


ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್ಟ ವಿಲ್ಲ !? 


ಮೆಹಂದಿ ಹಾಕಿಕೊಳ್ಳಲು ಕಾಲ ಸಮಯ ನಿಯಮವೇನೂ ಇಲ್ಲ. ಎಲ್ಲಾ ಕಾಲದಲ್ಲೂ ಹಾಕಿಕೊಳ್ಳಬಹುದು. 


ಬೆಸಿಗೆ ದಗೆಗೆ ಮೈ ಬಿಸಿ ಹೆಚ್ಚು ಇರುತ್ತದೆ. ನಮಗೆ ಆಗ ತಂಪು ಕೊಡುವ ಆಹಾರ, ಬಟ್ಟೆ, ಜೊತೆಗೆ ಕೆಲವು ತಂಪು ಮಾಡುವ ವಿದಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. 


ಮೆಹಂದಿ ದೇಹಕ್ಕೆ ತಂಪು ಕೊಡುತ್ತದೆ. ಮೆಹಂದಿ ಜೊತೆಗೆ ನಿಂಬೆರಸ ಬೆರಸಿ ತಲೆಗೆ ಹಚ್ಚಿ ಕೆಲವು ಸಮಯದ ನಂತರ ತಲೆಯನ್ನು ತೊಳೆದು ಕೊಳ್ಳುವುದರಿಂದ ದೇಹವು ತಂಪು ಆಗುತ್ತದೆ ಜೊತೆಗೆ ತಲೆ ಕೂದಲು ಹೊಳಪಾಗುತ್ತದೆ. 


ಕಾಲಿನ ಹಿಮ್ಮಡಿಗಳು ಬಿರುಕು ಬಿಟ್ಟಾಗಲೂ ಮೆಹಂದಿಯನ್ನು ಹಚ್ಚುವುದರಿಂದ ಕಾಲಿನ ಹಿಮ್ಮಡಿಗಳು ಮಾಯವಾಗಿ ಕಾಲಿನ ಅಂದ ಹೆಚ್ಚುತ್ತದೆ. 


ಇನ್ನೂ ಚಳಿಗಾಲ ಬಂದರೆ  ವಾತಾವರಣ ಪ್ರಭಾವ ದಿಂದ ಅನೇಕ ಸೂಕ್ಷ್ಮ ಕ್ರಿಮಿಗಳು ವ್ಯಾಪಿಸುತ್ತದೆ , ಹೊರಗಡೆ ತೇವಾಂಶವಿರುವುದರಿಂದ ಮನೆ ಕೆಲಸಗಳಲ್ಲಿ ನಿರಿನ ಬಳಕೆ ಮಾಡುವುದರಿಂದ ಕ್ರಿಮಿ ಕೀಟಗಳು ದೇಹವನ್ನು ಪಾದಗಳ ಮೂಲಕ ಸೇರುತ್ತದೆ. 


ಮೆಹಂದಿ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಯಾಗಿ ಕೆಲಸ ಮಾಡುತ್ತದೆ. 


ಇನ್ನು  ಶ್ರಾವಣ ಮಾಸ ಬಂದರೆ ಹಬ್ಬಗಳು ಸಾಲು ಸಾಲು. ಹೆಂಗಳೆಯರು ಕುಂಕುಮ ಬಳೆ ಹೂವು ಅಲಂಕಾರ ವಾಗಿ ಧರಿಸಿದರೂ ಕೈ ತುಂಬಾ ಮೆಹಂದಿಯ ವಿನ್ಯಾಸ ಹೆಣ್ಣಿಗೆ ಹೆಚ್ಚು ಸಂತಸ ಕೊಡುತ್ತದೆ. 


ಚಿಕ್ಕ ಮಕ್ಕಳಿಂದ ಹಿಡಿದು ಗೃಹಿಣಿ ಯರು ಹಾಕಿಕೊಳ್ಳುವರು. ಮೆಹಂದಿ ಹಾಕಿಕೊಳ್ಳಲು ಜಾತಿ ಅಡ್ಡ ಬರದು ಎಲ್ಲಾ ಪಂಥದವರೂ ಹಾಕುವರು. 


ಮಾರುಕಟ್ಟೆ ಯಲ್ಲಿ ಕೆಲವೊಮ್ಮೆ ನಕಲಿ ಮೆಹಂದಿ ತಿಳಿಯದೇ ತಂದು ಕೈಗಳಿಗೆ ಬಳಸಿದರೆ ಅದರಿಂದ ತುಂಬಾ ತೊಂದರೆ ಗಳ ಆಗುವ ಸಾಧ್ಯತೆಗಳು ಇರುತ್ತದೆ. 

ಒಳ್ಳೆಯ ಕಂಪನಿ ಮೆಹಂದಿಗಳು ನೋಡಿ ತರಬೇಕಾಗುತ್ತದೆ


ಮಧು ಮಗಳು  ಮೆಹಂದಿ ಇಲ್ಲದೆ ಅವಳ ಅಲಂಕಾರ ಪೂರ್ಣ ವಾಗದು. 


ಮೊದಲೆಲ್ಲಾ ಮೆಹಂದಿ ಎಲೆಗಳನ್ನು ಅರೆದು ಅದನ್ನು ಬಳಸುತ್ತಿದ್ದರು . 


ಈಗೆಲ್ಲ ಪುಡಿಗಳು ಅಥವಾ ಪೇಸ್ಟ್ ಗಳ ರೂಪದಲ್ಲಿ ಸಿಗುತ್ತದೆ 

ಒಟ್ಟಿನಲ್ಲಿ ಭಾರತ ಸಂಸ್ಕೃತಿ ಯ ಒಂದು ಭಾಗವಾಗಿದೆ ಈ ಮೆಹಂದಿ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...